ಮಫ್ತಿ ೨೦೧೭ರ ಕನ್ನಡ ಭಾಷೆಯ ಆಕ್ಷನ್ ಕ್ರೈಮ್ ಥ್ರಿಲ್ಲರ್ ಚಿತ್ರ. ನಾರ್ಥನ್ ರವರು ನಿರ್ದೇಶಿರುವ ಮೊದಲ ಚಿತ್ರ ಇದಾಗಿದೆ, ಜಯಣ್ಣ ಕಂಬೈನ್ಸ್ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರವು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿರುವ ಶ್ರೀಮುರುಳಿಯು ಭೂಗತ ದೊರೆ ಪಾತ್ರದಲ್ಲಿ ನಟಿಸಿರುವ ಶಿವರಾಜಕುಮಾರ್ ಅವರನ್ನು ಹುಡುಕಿಕೊಂಡು ಹೋಗುವ ಕಥೆಯಾಗಿದೆ. ಜುಲೈ ೨೦೧೬ ರಲ್ಲಿ ಚಿತ್ರದ ನಿರ್ಮಾಣ ಪ್ರಾರಂಭವಾಯಿತು ಮತ್ತು ೧ ಡಿಸೆಂಬರ್ ೨೦೧೭ ರಂದು ಚಿತ್ರ ಬಿಡುಗಡೆಯಾಯಿತು. ವಿಮರ್ಶಕ ಮತ್ತು ಪ್ರೇಕ್ಷಕರಿಂದ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಲಭಿಸಿತು. == ಪಾತ್ರವರ್ಗ == ಭೈರತಿ ರಣಗಲ್ ಪಾತ್ರದಲ್ಲಿ ಶಿವರಾಜ ಕುಮಾರ್. ಪೊಲೀಸ್ ಅಧಿಕಾರಿಯಾಗಿ ಶ್ರೀಮುರುಳಿ ಶಾನ್ವಿ ಶ್ರೀವಾಸ್ತವ ಭೈರತಿ ರಣಗಲ್ ಅವರ ಸಹೋದರಿ ವೇದಾವತಿಯಾಗಿ ಛಾಯಾ ಸಿಂಗ್ ಭೈರತಿ ರಣಗಲ್ ತಂಡದ ಸದಸ್ಯ ಸಿಂಗನಾಗಿ ಮಧು ಗುರುಸ್ವಾಮಿ ಭೈರತಿ ರಣಗಲ್ ತಂಡದ ಸದಸ್ಯ ಕಾಶಿಯಾಗಿ ವಸಿಷ್ಠ ಎನ್ ಸಿಂಹ ಭೈರತಿ ರಣಗಲ್ ಅವರ ಬಲಗೈಬಂಟ ಶಬರಿಯಾಗಿ ಬಾಬು ಹಿರಣ್ಣಯ್ಯ ಭ್ರಷ್ಟ ರಾಜಕಾರಣಿ ರಘುವೀರ್ ಭಾಂದ್ರಿಯಾಗಿ ದೇವರಾಜ್ ಸಾಧು ಕೋಕಿಲಾ ಪ್ರಕಾಶ್ ಬೆಳವಾಡಿ ಚಿಕ್ಕಣ್ಣ ರೋನಿಯಾಗಿ ರಾಜ್ ಸೂರ್ಯ == ಉಲ್ಲೇಖಗಳು ==